Friday, 3 February 2012

ಹಾಗೆ ಪೋಣಿಸಿದ್ದು....ಅವಳಿಗಾಗಿ

ನನ್ನವಳು ಹೊರತಾಳ ನೀರಿಗೆ...
ಜೊತೆಗೆ ನೀ ಹೋಗುವೆಯಾ ವಾರಿಜೆ...

ಹಸಿರುಟ್ಟು...ಹೂ ಸೆಗೆಸಿ....
ನೆರಿಗೆಯ ನೊದೆಯುತ ......ಹೊರತಾಳ....
ಶಾನುಭೋಗರ ಮನೆಯ ಹಾದಿಯದು ಸರಿ ಇಲ್ಲ...ಎಡವಿ ಬಿದ್ದಾಳ...
ದಯಮಾಡಿ ಜೊತೆ ಹೋಗೆ ವಾರಿಜೆ..

ಕೆರೆಯ ದಂಡೆಯ ತೀರ..
ಬಿಂದಿಗೆಯನೋಯ್ಯುತ..ಹೊರಟಾಗ ನನ್ನವಳು.
ಮಾಗೀಯ ಚಳಿ ಗಾಳಿ...ಮುಂಗುರುಳನು ತಾಕಿ..
ಕಣ್ಮುಚ್ಚಿ ಬಿದ್ದಾಳ....
ದಯಮಾಡಿ ಜೊತೆ ಹೋಗೆ ವಾರಿಜೆ...

ಮನದನ್ನೆ ನನ್ನಾಕೆ...ಹೂವಂತೆ ಸಲಹಿರುವೆ..
ಪ್ರೀತಿಯನು ಎರೆದಿರುವೆ...
ಅವಳಿಂದ ನಾ ಎಲ್ಲ....ನನಸನ್ನು ಕಂಡಿರುವೆ...
ದಯಮಾಡಿ ಜೊತೆ ಹೋಗೆ ವಾರಿಜೆ...

ಬರುವಾರ ಸಂತೆಯಲಿ...ನಿನಗೆಂದು..
ಹುರಿಗಡಲೆ, ಬಳೆ ತರುವೆ...
ದಮ್ಮಯ್ಯ ಜೊತೆ ಹೋಗೆ ವಾರಿಜೆ...
ನನ್ನವಳ ಹಿತ ನೀನು ನೀರಜೆ....

(ಹಾಗೆ ಪೋಣಿಸಿದ್ದು....ಅವಳಿಗಾಗಿ)

No comments:

Post a Comment