Friday, 3 February 2012

PLEASE ಇವೆಲ್ಲವನ್ನೂ ಬಿಟ್ಟು ಇನ್ನೇನಾದ್ರು ಇದ್ರೆ ಹೇಳಿ.....

೧.ಒಬ್ಬ ವೇಶ್ಯೆಯ ಬಗ್ಗೆ ಏನು ಹೇಳಲಾದೀತು...
ಜೀವನದಲ್ಲಿ ನೋವುಂಡ ಒಬ್ಬ ವ್ಯಕ್ತಿ ಅಥವಾ ವಾಂಚೆಗೆ ಹೋಗುವ ವ್ಯಕ್ತಿ..ಮಾಂಸದ ಬೀದಿಗೆ ಹೋಗಿ,ಅವಳನ್ನು ಕಂಡು,ಅವಳ ಮಡಿಲಲ್ಲಿ ತಲೆಯಾಗಿ...
"ನೀ ಯಾಕೆ ಹೇಗೆ ಬದುಕುತ್ತೀಯ ಅಂತ ಕೇಳಿ??"..."ನೀನು ಇಂತಹ ಜಾಗಕ್ಕೆ ಮೊದಲು ಬಂದಿಲ್ವೆ??ಯಾರು ಈ ಥರ ಕೇಳೋಲ್ಲ"ಅಂತ ಅವಳು...ಅವನು...ಕಥೆಗಳಲಿ ರಾತ್ರಿ ಕಳೆಯುವ...TRANSFORMS ಗಳನ್ನೂ ಬಿಟ್ಟು...ಬೇರೆನಾದರು ಹೇಳೋದಿದ್ಯ??

೨.ಒಂದು TV ಯ ಬಗ್ಗೆ ಏನು ಹೇಳಲಾದೀತು??
ಯಾರದೋ ಹಂಗಿನ ಚಾನೆಲ್ಗಳು...ಅವರ ಕಥೆಗಳು..ರಾಜಕೀಯಗಳು....ಅವಳು ವಾಂತಿ ಮಾಡಿದಳಂತೆ...ಇವಳು ಎತ್ತಿಹಾಕಿದ್ಳಂತೆ...ಅವಳು ಬಸುರಿಯಂತೆ...ಹ್ಯಾಗಂತೆ...ಮಗುವಾಯ್ತಂತೆ...ಹೇಗಂತೆ....ಊಟವೇ ಮಾಡೋಲ್ವಂತೆ...ಹಾಗಂತೆ..ಹೀಗಂತೆ...ಕೊನೆಗೆ...."ಹೀಗೂ ಉಂಟೆ"..

೩.ಪದ್ಯ/ ಕವಿತೆಗಳ/ಕವಿಗಳ.. ಬಗ್ಗೆ ಇನ್ನೇನು ಹೇಳಲಾದೀತು...
ಪ್ರೇಮ ಸಲ್ಲಾಪಗಳು,ತಿರುಚಿದ ಅನುವಾದಗಳು,ಕದ್ದು ಬರೆದು ತಾನೇ ಬರೆದೆ ಎನ್ನುವ ವ್ಯಕಿಗಳು...ಬುದ್ಧಿ ಜೀವಿಯ ಗಡ್ದಗಳು....ಹೊಟ್ಟೆ ಉರಿಗಳು..ಪ್ರಶಸ್ತಿಗಳು...ಹಿಂಸೆಗಳು...ಅವುಗಳು..ಇವುಗಳು...

೪.ಒಂದು ಚಲನಚಿತ್ರದ ಬಗ್ಗೆ ಏನು ಹೇಳಲಾದೀತು...
ಕಂಡೋರ ಜೀವನದ ಕಥೆಗಳು...ಹೋಲಿಸಿದ ನಟನೆಗಳು...ಸಿಲ್ಕ್ ಸ್ಮಿತಾಳ ಹೆಸರಿನಲ್ಲಿ...ಇವರು... ದೋಚಿ ಬಾಚಿದ ದುಡ್ಡುಗಳು....ಎಂಜಾಯ್ ಮಾಡುವ ನಾವುಗಳು..
ಡಬ್ಬಿಂಗ್ ಗಳು...ಕೆಟ್ಟ ಹಾಡುಗಳು...ಕುರಿ...ಕೋಳಿ...ಕಬ್ಬಿಣಗಳು...ಹಳೆ ಪಾತ್ರೆಗಳು...

೫.ಒಂದು ಸ್ಕೂಲ್ ನ ಬಗ್ಗೆ ಏನು ಹೇಳಲಾದೀತು...??
ಅದೇ ಪಾಠಗಳು ....ಪದ್ಯಗಳು...ಸಂಬಳದ ಅನಿವಾರ್ಯತೆಯ ಮೇಷ್ಟ್ರುಗಳು...ಮೌಲ್ಯವಿರದ theory ಗಳು ...ಸಣ್ಣ ವಯ್ಯಸಿಗೆ COMPETITION ಗಳು...ಜಿಗುಪ್ಸೆಗಳು...ಆತ್ಮಹತ್ಯೆಗಳು...
ಅಣು ವನ್ನು ವಿಂಗಡಿಸೋದು ಕಲಿಸ್ತಾರೆ...ಅಣು ಅಣುವಾಗಿ ಜೀವನವನ್ನ ಅರ್ಥ ಮಾಡ್ಕೊಳ್ಳೋದು...ಹೇಳ್ಕೊದೊದಿಲ್ಲ್ವೆ....

PLEASE ಇವೆಲ್ಲವನ್ನೂ ಬಿಟ್ಟು ಇನ್ನೇನಾದ್ರು ಇದ್ರೆ ಹೇಳಿ.....

'ನಾನು' ನಿಧನವಾಗಿಬಿಟ್ಟೆ.....

'ನಾನು' ನಿಧನವಾಗಿಬಿಟ್ಟೆ.....
'ಭೂತವೆಂಬ' ಸಮಾಧಿಯಲ್ಲಿ ನನ್ನ ಹೂಳ ಹೊರಟಿರಿ.

ನನ್ನ ಈ ಉತ್ಕ್ರಮಣ,ದುರ್ಬಲದ ಸಂಕ್ರಮಣ
ನನ್ನ ನೋವ ಉದಧಿಯಾಗಿ ಮಾಡಿಬಿಟ್ಟಿರಿ.

ಪರಂಪರೆಯ 'ಸ್ವಾರ್ಥಗಳ' ಎಳ್ಳು ಹಾಕಿ
'ಪೂರ್ವಾಗ್ರಹದ' ಅಕ್ಕಿ ಬೆರೆಸಿ
ನನ್ನ ಬಾಯ ಅಂದು ನೀವು ಮುಚ್ಚಿಬಿಟ್ಟಿರಿ

'ಪುರಾತನದ' ನೀರು ಸುರಿದು
'ಬೇಧವೆಂಬ' ಬಟ್ಟೆ ಹೊಡೆಸಿ
'ಮೌಡ್ಯತೆಯ' ಚಟ್ಟಕ್ಕೆ ನನ್ನ ಹೊರೆಸೆಬಿಟ್ಟಿರಿ

ಅವರು, ಇವರು, ನೀವು, ತಾವು
ನಾಕು ಜನರು ಹೆಗಲುಗೊಟ್ಟು
'ಮೌನವೆಂಬ' ಮೆರವಣಿಗೆಯಲ್ಲಿ
ಮಸಣಕೆನ್ನ ತಂದೆಬಿಟ್ಟಿರಿ

'ಮೊದಲೇ ಅಗೆದು' ತೆಗೆದು ಇಟ್ಟ ಗುಂಡಿಯಲ್ಲಿ....ನನ್ನ.
ಹೇಳ ಹೆಸರು ಇಲ್ಲದೇನೆ
'ಅಇಬುಗಳ' ಮಣ್ಣು ಸುರಿದು...ಮುಚ್ಚಿಬಿಟ್ಟಿರಿ..

'ಹೊಸತಾಗಿ' ಬಾಳದೆಯೇ
'ನನ್ನನ್ನು' ಅರಿಯದೆಯೇ...
ಎಲ್ಲರಂತೆ ನಾನು ಅಂದು..
ನಿಧನವಾದೆನು....ನಿಧಾನವಾಗಿಬಿಟ್ಟೆನು....

ಹಾಗೆ ಪೋಣಿಸಿದ್ದು....ಅವಳಿಗಾಗಿ

ನನ್ನವಳು ಹೊರತಾಳ ನೀರಿಗೆ...
ಜೊತೆಗೆ ನೀ ಹೋಗುವೆಯಾ ವಾರಿಜೆ...

ಹಸಿರುಟ್ಟು...ಹೂ ಸೆಗೆಸಿ....
ನೆರಿಗೆಯ ನೊದೆಯುತ ......ಹೊರತಾಳ....
ಶಾನುಭೋಗರ ಮನೆಯ ಹಾದಿಯದು ಸರಿ ಇಲ್ಲ...ಎಡವಿ ಬಿದ್ದಾಳ...
ದಯಮಾಡಿ ಜೊತೆ ಹೋಗೆ ವಾರಿಜೆ..

ಕೆರೆಯ ದಂಡೆಯ ತೀರ..
ಬಿಂದಿಗೆಯನೋಯ್ಯುತ..ಹೊರಟಾಗ ನನ್ನವಳು.
ಮಾಗೀಯ ಚಳಿ ಗಾಳಿ...ಮುಂಗುರುಳನು ತಾಕಿ..
ಕಣ್ಮುಚ್ಚಿ ಬಿದ್ದಾಳ....
ದಯಮಾಡಿ ಜೊತೆ ಹೋಗೆ ವಾರಿಜೆ...

ಮನದನ್ನೆ ನನ್ನಾಕೆ...ಹೂವಂತೆ ಸಲಹಿರುವೆ..
ಪ್ರೀತಿಯನು ಎರೆದಿರುವೆ...
ಅವಳಿಂದ ನಾ ಎಲ್ಲ....ನನಸನ್ನು ಕಂಡಿರುವೆ...
ದಯಮಾಡಿ ಜೊತೆ ಹೋಗೆ ವಾರಿಜೆ...

ಬರುವಾರ ಸಂತೆಯಲಿ...ನಿನಗೆಂದು..
ಹುರಿಗಡಲೆ, ಬಳೆ ತರುವೆ...
ದಮ್ಮಯ್ಯ ಜೊತೆ ಹೋಗೆ ವಾರಿಜೆ...
ನನ್ನವಳ ಹಿತ ನೀನು ನೀರಜೆ....

(ಹಾಗೆ ಪೋಣಿಸಿದ್ದು....ಅವಳಿಗಾಗಿ)

ಬಾಡಿಗೆ ಜಾಸ್ತಿಯಾಯ್ತು ...ಮನೆ ಖಾಲಿ ಮಾಡೋದಿದೆ.

ಬಾಡಿಗೆ ಜಾಸ್ತಿಯಾಯ್ತು ...ಮನೆ ಖಾಲಿ ಮಾಡೋದಿದೆ.
ಎಷ್ಟು ಮನೆಯಾಯ್ತೋ??ಒಂದು,ಎರಡು,ಐದು........ಎಂಟು.
ಒಂಥರಾ ದೊಂಬರ ಜೀವನ...

ಪ್ರಯಾಸವಂತು ಯಾಕೆ..ಏನಿದೆ ಅಂಥದ್ದು..
ಆದೆ ಹಳೆಯ ಹಂಡೆ...ಅವಳ ಅಪ್ಪ ಕೊಟ್ಟದ್ದು...
ಮುದುರಿಟ್ಟ ಹಾಸಿಗೆ...ನಾ ತಂದದ್ದು...
ಹೊತ್ತಿಗೆ ಬೇಯಿಸಲು ನಾಕು ಪಗಾರ....ಅಸ್ಟೆ.

ಬಿಸಿ ನೀರಿಗೆ ಹಂಡೆಯೇ ಬೇಕೇ?
ತಿಂಗಳಾದರೆ ಕರಳು ಕಿವುಚಿ ಬರುವುದು...ಕಣ್ಣಿನಲ್ಲೂ...
ಅದೇ ತೋಯುವುದು ಮೈ ಪೂರ್ತಿ...ಬಿಸಿ ಬಿಸಿಯಾಗಿ...

ಬರುವ ಸಂಬಳ ಎಂತಕೆ??
ಬೇಳೆ-ಕಾಳು.....ಕಸ-ಕಡ್ಡಿಗೆ...ಕಾಪೀ ಪುಡಿಗೆ....
ಫಿಜು-ಗೀಜಿಗೆ.....ಮಕ್ಕಳ ಗೋಜಲಿಗೆ..

ಅವಳಿಗೆ ಹೇಳಿದ್ದೆ-" ಗಂಜಿ ಮಾಡಿಬಿಡು...."
ಅಮೃತದಂತೆ ಮಾಡಿದ್ದಳು ಅಂಬಲಿಯನು...
ಅವಳು ಎಲ್ಲವನು ಹೊಂದಿಸಿಕೊಂದು ಹೋಗುವಾಕೆ.....ನನ್ನಾಕೆ..!!

ಹೊಟ್ಟೆ ತುಂಬಾ ಕುಡಿದು....ಮೈ ಮುರಿದು......
ಮಲಗಿದೆ...ಮುದುರಿಟ್ಟ ಬಂತೆಯಲಿ.....

ಜೀವನದ ಸತ್ವ

ಒಮ್ಮೆ ಕಾಡಿನಲ್ಲಿ ಒಬ್ಬ ಪ್ರಯಾಣ ಮಾಡುತ್ತಿದ್ದ...ಹಾಗೆ ಓಡಾಡುತ್ತಿದ್ದಾಗ ಹಿಂದೆ ಏನೋ ಶಬ್ದ ಬಂದಂತೆ ಅನಿಸಿತು..ಆವನು ತಿರುಗಿ ನೋಡಲಿಲ್ಲ..
ಹಾಗೆ ಮುಂದೆ ಹೋಗುತ್ತಿದ್ದಂತೆ ಶಬ್ದ ಇನ್ನು ಜಾಸ್ತಿ ಆಯಿತು...ಆದರು ಗಮನಿಸಲಿಲ್ಲ...
ಕೊನೆಗೆ ಶಬ್ದ ಜೋರಾದಾಗ ಹಿಂದೆ ತಿರುಗಿ ನೋಡ್ತಾನೆ..."ಹುಲಿ"...ಅಬ್ಬೋ..ಗಾಬರಿ ಇಂದ ಓಡ್ತಾನೆ...ಓಡ್ತಾನೆ..........
ಹಾಗೆ ಒಡ್ತೈದ್ದಾಗ...ಮುಂದೆ ಒಂದು ಭಾವಿ ಲಿ ಕಾಲು ಜಾರಿ ಬಿದ್ದುಬಿಡ್ತಾನೆ...!!!ಪಾಪ
ಆದ್ರೆ ಅವನಿಗೆ ಒಂದು ಮರದ ಬೇರು ಭಾವಿಯಲ್ಲಿ ಆಸರೆಯಾಗಿ ಸಿಗತ್ತೆ...ಅದನ್ನೇ ಹಿಡ್ಕೊಂಡು ನೆತಾಡುತಿರ್ತಾನೆ...
ಹಾಗೆ ಭಾವಿಗೆ ಹಾರೋಣ ಅಂತ ಕೆಳಗೆ ನೋಡ್ತಾನೆ "ದೊಡ್ಡದೊಂದು ಹೆಬ್ಬಾವು"!!!!!!!!
ಹೇಗೋ ಬದುಕಿಕೊಂಡರೆ ಆಯಿತು ....ಸ್ವಲ್ಪ ಹೊತ್ತು ಈ ಬೇರು ಹಿಡ್ಕೊಂಡೆ ಇರ್ತೀನಿ ಅಂತ ಯೋಚನೆ ಮಾಡೋ ಹೊತ್ತಿಗೆ ...
ದೊಡ್ಡದೊಂದು ಹೆಗ್ಗಣ ಆಆಸರೆ ಆಗಿದ್ದ ಬೇರನ್ನು ಕಡಿತಾ ಇರತ್ತೆ ......
ಬದುಕುವ ಯಾವ ಆಸರೆಯೂ ಇಲ್ಲ......:-(
ಹಾಗೆ ಮೇಲೆ ನೋಡ್ತಾನೆ......ಮರದ ಮೇಲೆ ಜೇನು ಗೂಡು ಇರತ್ತೆ....ಅಲ್ಲಿಂದ ಒಂದೇ ಒಂದು ಜೇನು ಹನಿ ಬಿಳತ್ತೆ ......
ಇವನು ಅಂತಹ ದುಖದ ಮಧ್ಯೆಯೂ...ನಾಲಿಗೆ ಚಾಚಿ...ಆಆಆಆಆಆ ......ಅಂತ ಬಾಯಿ ಬಿಡ್ತಾನೆ...!!!!
(ನಮಗೂ ಹಾಗೆ ಅಲ್ವೇ...ಬದುಕುವ ಯಾವ ಆಸರೆಯೂ ಇಲ್ಲದೆ ಇದ್ರೂ...ಮಧ್ಯದಲ್ಲಿ ಇಂತಹದೊಂದು ಕ್ಷಣಿಕ ಆನಂದ ಸಿಕ್ರೆ ನಾಲಗೆ ಚಾಚುತ್ತೇವೆ......!!)