Saturday 26 November 2011

"ಜವೇರಾ" ಮುಂದೇನು ಮಾಡಬಹುದು??

ಮಸಿದಿಯ ಮುಲ್ಲ "ಜವೆರಾ"ಳ ಎದೆಯನ್ನು ತಿವಿದು ತಿವಿದು ಕೇಳುತ್ತಿದ್ದ...ಹೇಳು ಸೋದರಸಂಬಂಧಿಯಾದ ನಿಜಾಮನೊಂದಿಗೆ ನೀ ಯಾಕೆ ಹೀಗೆ ಮಾಡಿದೆ?
ನಿನಗೆ ಗೊತ್ತಿಲ್ಲವೇ ನಮ್ಮ ಧರ್ಮದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದು?ಕಿಟಕಿಗೆ ಕಟ್ಟಿದ್ದ ಕೈಯನ್ನ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು ಜವೇರಾ...ಹೇಗೋ ಖುದಾನ ಮಾಫಿ ಕೇಳುವಳು ಬಿಟ್ಟುಬಿಡಿ ಎಂದು ಊರಿನ ಇನ್ನೊಬ್ಬ ಹಿರಿಯ ಮುಲ್ಲಾನಿಗೆ ಹೇಳಿ,ಇನ್ನೊಮ್ಮೆ ಹೀಗೆ ಮಾಡಬೇಡ ಎಂದು ಗದರಿಸಿ ಕಳಿಸಿದ್ದ...
ಇನ್ನೊಮ್ಮೆ ಮಾಡಬಾರದೆ?ನಾನು ಮಾಡದೆ ಇರೆನು ನೋಡಿ...ಎಂದು ಮನಸಿನಲ್ಲೇ ಹೇಳಿಕೊಂಡು ಹೊರಬಂದ್ದಿದಳು ಜವೆರಾ..

ಇದೆಲ್ಲ ನಡೆದು ದಿನಗಳೇ ಉರುಳಿದೆ..ಅಲ್ಲ ನಾನು ಮಾಡಿದ್ದ ತಪ್ಪಾದರೂ ಏನು ಪ್ರೀತಿಸಿದ್ದೆ?ಸಂಬಂಧಿಯಾದರೇನು?ಸೋದರಸಂಬಂಧಿಯಾದರೇನು?ಅವನು ಕೊಟ್ಟಂತಹ ಪ್ರೀತಿ ಇವರ್ಯಾರಿಗೆ ಕೊಡಲು ಸಾಧ್ಯವಾಯಿತೇ?ಸಂಬಂಧದ ನೆಪವಿರಿಸಿಕೊಂಡು ಇವರು ಕೊಟ್ಟ ಯಾತನೆ ಹೀನಾಯ...!

ಖುದಾನ ಅವಕೃಪೆಗೆ ಎಂದು ಒಳಗಾದೇನೋ ಗೊತ್ತಿಲ್ಲ..ನಮಾಜ್ ಮಾಡಲು ಮರೆತೇ..ಹೀಗಾಗಿ ಬಿಟ್ಟಿತೆ?..ಅಲ್ಲದೆ ಇನ್ನೇನು..ಎಂದೂ ಬರದ ಅಮ್ಮ ತೋಟದ ಮನೆಗೆ ಅಂದೇ ಯಾಕೆ ಬಂದಳು?ಮಗಳೆಂಬ ಮಮಕಾರವು ಇಲ್ಲದೆ ಮಸಿದಿಯ ಮುಲ್ಲಾನಿಗೆ ಹಿಡಿದುಕೊಟಳು ..ಎಂತಹ ಪ್ರಾಯಶ್ಚಿತ್ತ ಇದು?ಪಾಪ ನನ್ನಿಂದ "ನಿಜಾಮ"ನು ಬಹಿಷ್ಕಾರದಿಂದ ಊರ ಹೊರ ಹೋದ..ಅವನ ಭವಿಷ್ಯವೇನೋ?ಇಲ್ಲಾದರೂ ಯಾರೋ ಇರುತ್ತಿದ್ದರು,ಮಾಂಸದ ಅಂಗಡಿ ಇತ್ತು ಹೇಗೋ ಜೀವನ ನಡೆದು ಹೋಗುತ್ತಿತ್ತು..ಈಗೆಲ್ಲಿದ್ದಾನೋ ಏನೋ?ಮ್ಸ್ಚ್!
ಅವನ ತೆಕ್ಕೆಯಲ್ಲಿ ಹರಿದಾಡಿದ ಒಂದೊಂದು ಭಾವನೆಯು ನನ್ನಲ್ಲಿ ಇನ್ನೂ ಜೀವಂತವಾಗಿದೆ,ಬದುಕಿನ ಆಶಾಗೊಪುರವೇ ಕಟ್ಟಿ ಮೆರೆದಿದ್ದೆವಲ್ಲ..ಒಂದಲ್ಲ ಎರಡಲ್ಲ..ಮೂರು ವರ್ಷ ಯಾರಿಗೂ ತಿಳಿಯದಂತೆ ಗೌಪ್ಯವಾಗಿ ಬೆಳೆಸಿದಂತಹ ಸ್ನೇಹ..ಅಲ್ಲ..ಪ್ರೀತಿ ಅದು,ಎಂದೂ ಕಾಮವಾಗಿ ತಿರುಗಲಿಲ್ಲ..ನಿಸ್ವಾರ್ಥ ಪ್ರೀತಿ.
ಇಂತಃ ಪ್ರೀತಿ ಕೇವಲ ಅಮ್ಮನಿಂದ ಹಾಳಾಗಿ ಹೊಇತೆ..

ಸಂಬಂಧದ ಕಾರಣದಿಂದ ನಮ್ಮನ್ನು ದೂರ ಮಾಡಿದರೆ ಇವರು?ನನ್ನ ಜಿಗುಪ್ಸೆ,ಆರ್ತಭಾವ,ಜೀವನದಲ್ಲಿ ಅನುಭವಿಸಿದ ಯಾವ ಯಾತನೆಯೂ ಅವನು ಉಳಿಯಲು ಬಿಡಲಿಲ್ಲ..ಒಂದೊಂದು ಎಳೆಎಳೆಯಾಗಿ ನೀಗಿಸಿದ್ದ..ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶಿಸಿದ್ದ..ನಮ್ಮಿಬ್ಬರ ನಡುವೆ ಯಾವ ಸೋದರಸಂಬಂಧಗಳ ಲಕ್ಷ್ಯವಿರಲಿಲ್ಲ,ಎರಡು ಜೀವಗಳ ಸಮ್ಮಿಲನವಾಗಿದ್ದವು,ಮನಸ್ಸುಗಳು ಮೌನವಾಗೇ ಪ್ರೀತಿಸಿದ್ದವು,ವಿಚಾರಗಳನ್ನೂ ಚರ್ಚಿಸಿದ್ದವು,ಕ್ಷಣ ಕ್ಷಣವು ನನ್ನ ಆಂತರ್ಯದ ಕೂಗು ಅವನಿಗೆ ಕೇಳಿಸುತ್ತಿತ್ತು..ಒಂದು ವಿಚಾರ ಲೋಪವಾದರೂ ಗೊತ್ತಾಗಿಬಿಡುತ್ತಿತ್ತು ನನಗೆ..ಅವನ "ಮೌನ"ಅಬ್ಬ!!ದ್ರುತಿಗೆಡಿಸಿ ಬಿಡುತ್ತಿತ್ತು,ನನ್ನ ಎಲ್ಲಾ ಬೇಜವಾಬ್ದಾರಿಗೂ ಅವನು ಉತ್ತರಿಸುತ್ತಿದ್ದ ರೀತಿಯೇ ಮೌನ..ಗೋಗರೆದು ಕ್ಷಮೆಯಾಚಿಸುತ್ತಿದ್ದೆ,ಮತ್ತೆ ಅಲ್ಲಿಂದ ಹೊಸದಾಗಿ ಪ್ರೀತಿಸಿದವರಂತೆ ನಮ್ಮ ನಡವಳಿಕೆಗಳು..ಎಂತಹ ಮಧುರಾನುಭವ..ಇಂತಹ ಪ್ರೀತಿಯನ್ನು ಇವರು ಸಂಬಂಧದ ನೆಪ ಮಾಡಿ ಕಿತ್ತುಕೊಂಡರೆ ನನ್ನಿ೦ದ??..ಇವರು ಮಾಡಿದ್ದು ಮಾತ್ರ ಅನ್ಯಾಯ??
ಮಸಿದಿಯ ಮುಲ್ಲ ಬರೆ ಹಾಕಿದನೆ?ಕಿಟಕಿಗೆ ಕೈ ಕಟ್ಟಿ..ಚಿ!ಕ್ರೂರವೇ ತುಂಬಿಕೊಂಡ ಅವರ ಮನಸಿಗೆ ನನ್ನ -ಪ್ರೀತಿ ಅರ್ಥವಾದರೂ ಹೇಗಾದೀತು?.ನನ್ನ ಎದೆಯಗಾಯ ಮಾಗಿಲ್ಲ..ಅಲ್ಲಾನ ಹೆಸರಲ್ಲಿ ಬರೆ ಹಾಕಿದರೆ..ಅಲ್ಲಾ ಇಂತಹ ಕ್ರೂರಿಯೇ?..ಆ ಬರೆಗಳು ನನ್ನ ಆಂತರ್ಯವನ್ನು ಸುಡಲು ಸಾಧ್ಯವೇ?ಅಂತಹ ನೂರಾರು ಬರೆ ಹಾಕಿ ನನ್ನ ಸುಟ್ಟರು,ಸಂಬಂಧಗಳನ್ನು ಮೀರಿ ಅವನೊಂದಿಗೆ ಕುರುವೊಡೆದು ಹುಟ್ಟುವ ಹೊಸಚರ್ಮದಂತೆ ಬೆಳೆಯುತ್ತದೆ..ಮತ್ತೆ ಅವನು ಎಲ್ಲಿಯಾದರೂ ಇರಲಿ..ಹುಡುಕಿಕೊಂಡು ಹೋಗುವೆ..ಅವನಿಗೆ ನನ್ನ ಜರೂರತೆ ಇದೆ..ಮತ್ತೆ ಒಂದಾಗುತ್ತೇವೆ..ಏನಾದರು ಆಗಲಿ..
ಖುದಾ ನನಗೆ ಸಹಾಯ ಮಾಡು..

(ಜವೇರ ಮುಂದೇನು ಮಾಡಬಹುದು???)

1 comment:

  1. ಪರಿಶುದ್ದ ಪ್ರೀತಿಯನ್ನು ನೀವು ನಿರೂಪಿಸಿದ ಬಗೆ ಇಷ್ಟವಾಯ್ತು....
    ಪ್ರೀತಿಗೆ ಅಡ್ಡಿ ಆತಂಕಗಳು ಸಹಜವೇ..
    ಜವೇರ ಬಾಳು ಹಸನಾಗಲಿ...

    ReplyDelete