Friday, 25 November 2011

"ವಾರಿಜೆಯ ವಾಂಛೆ" !!!ಇವಳಿಗೆ ನಿಮ್ಮ ಸಮಾದಾನ ಏನು ???

ಕಾಲನು ತಿರುಗಿದ್ದಾನೆ!!

ಛೆ!ಹೇಳಲು ಹೊರಟ ವಿಚಾರವೇ ಅವನಿಗೆ ತಲುಪಲಿಲ್ಲವಲ್ಲ ಎಂದು ಬೇಸರಿಸಿಕೊಂಡಳು "ವಾರಿಜೆ".
ಪ್ರತೀಬಾರಿ ಅವನೊಂದಿಗೆ ಹಂಚಿಕೊಳ್ಳಲು ಹೋದಾಗಲೇ ಈ ಪೀಡೆ ಜೊತೆಗೇ ಬರಬೇಕೆ?ಎಂದು ಮಗಳನ್ನ ಶಪಿಸಿದಳು.
ಅಲ್ಲ,ಹತ್ತು ವರ್ಷಗಳ ಕಾಲ ಅನುಭವಿಸಿದ ಯಾತನೆ ,ನೋವು,ಜಿಗುಪ್ಸೆ,ಅವಮಾನ,ಸ್ವಾಸ್ತ್ಯ ದಾಂಪತ್ಯಕ್ಕೆ ಬೇಕಾದ ಯಾವ ನಿರೀಕ್ಷೆಗಳು ಅವನಿಂದ ಪೂರೈಸಲು ಆಗಲಿಲ್ಲವೇ,ಎಲ್ಲ ದರಿದ್ರಗಳು ಅವನ ಜೊತೆಗೆ ಹೋಯ್ತು ಅಂದುಕೊಂಡೆ, ಆದರೆ ಈ ಪೀಡೆ ಹೀಗೆ ಉಳಿಯಿತಲ್ಲ ಎಂದು ಕೆಲದಿನಗಳ ಹಿಂದೆ ಕುಡಿದು ಕುಡಿದು ಸತ್ತ ಗಂಡನನ್ನು ನೆನೆಯುತ್ತ ,ಮಲಗಿದ್ದ ಮಗುವನ್ನ ದುರುಗುಟ್ಟುತ್ತ....ತನ್ನೊಳಗೆ ಜ್ವಲಿಸುತ್ತಿರುವ ವಾ೦ಛೆಯನ್ನು ಆ "ಆಗಂತುಕ"ನಿಗೆ ಹೇಳಲು ಆಗುತ್ತಿಲ್ಲವೇ ಎಂಬ ನಿರಾಸೆ.ಅವನು ಕೈ ತಪ್ಪಿ ಹೋದರೆ?ನನ್ನ ಬಯಕೆಗಳ ಗತಿಏನು??ಎಂದೆಲ್ಲ ತಳಮಳ.

ವಿಧವೆಯಾಗಿ ತನ್ನ ವಾಂಛೆಯನ್ನ ಬೂದಿ ಮಾಡಬೇಕೆ?ಹಳೆಯ ಪರಂಪರೆಯೊಂದಿಗೆ ಹುದುಗಿಸಿಕೊಲ್ಳಲೇ?ನನ್ನ ತಪ್ಪಾದರೂ ಯಾಕಾದೀತು?ಪ್ರಕೃತಿಯ ನಿಯಮಗಳಲ್ಲ್ಲಿ ಇದು ಒಂದು ತಾನೇ?ಕೆರಳಿದ ವಾ೦ಛೆಯನ್ನು ಸುಖಾಸುಮ್ಮನೆ ಹೀಗೆ ತಿರಸ್ಕರಿಸಲಾದೀತೇ?ಆದರೆ ನ್ನನದೇ ಕರುಳ ಬ ಬಳ್ಳಿಯನ್ನು ದ್ವೇಷಿಸಿ ,ಶಪಿಸುವಷ್ಟು ಕ್ರೂರವೇ ಈ ವಾಂಛೆ? ಎಂದು ಯೋಚಿಸತೊಡಗಿದಳು.ಗಂಡ ತೀರಿ ಹೋದ ಹನ್ನೊಂದನೆ ದಿನ ಮುಗಿದಿಲ್ಲ,ಶ್ರಾದ್ಧ ಕಾರ್ಯಗಳು ಯಾರೋ ಮಾಡುತ್ತಿದ್ದಾರೆ..ಇಂತಹ ವೈರುಧ್ಯದ ನಡುವೆಯೂ"ಆಗಂತುಕ"ನ ಮೇಲೆ ಪ್ರೀತಿ ಪುಟಿಯಿತೆ? ಇದು ಪ್ರೀತಿಯೇ?
ಅದು ಪ್ರೀತಿಯೋ?ಕಾಮವೋ?ವಾ೦ಛೆಯೋ?ತಿಳಿಯದು,ಇಂತಹ ಸನ್ನಿವೆಶದಲಿ ನನ್ನೊಳಗೆ ಇಂತಹ ಭಾವನೆ ಹುಟ್ಟಿದ್ದಾದರೂ ಹೇಗೆ?ಎಂದು ಗೋಡೆಯನ್ನು ನೋಡುತ್ತಿದ್ದ ವಾರಿಜೆಗೆ ಮಲಗಿದ್ದ ಮಗು ಎದ್ದು "ಅಮ್ಮ" ಎಂದಾಗ ....
ತನ್ನ ವಾಂಛೆ ಮರೆತೇ ಹೋಯಿತು....

(ಈಗ ಹೇಳಿ...ಈ ಸಣ್ಣ ಕಥೆಯಲ್ಲಿ "ಆಗಂತುಕ" ಹೆಸರಿಲಲ್ಲದೆ,ಬೇರೆ ಯಾವ ಸುಳಿವು ಇಲ್ಲದೆಯೇ ಮಾಯವಾಗುತ್ತಾನೆ,ಪ್ರಮುಖವಾಗಿ ಇಲ್ಲಿ ಹೇಳ ಹೊರಟಿರುವುದು ವಾರಿಜೆಯ ವಾಂಛೆಯ ಬಗ್ಗೆ ...(ವಾಂಛೆ ಅಂದರೆ ಕಾಮವೇ ಆಗಬೇಕಿಲ್ಲ) ನಿಮ್ಮ ಅನಿಸಿಕೆ ಏನು..ಮನುಷ್ಯನು ಇಂತಹ ಸನ್ನಿವೇಶದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು?
ವಾರಿಜೆಯೇ ಸ್ಥಿತಿ ಇಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ..ಇನ್ನು ನಮ್ಮೆಲ್ಲರ ಅನಿಸಿಕೆಗಳ ಬಗ್ಗೆ ಚರ್ಚೆ ಆಗಲಿ..ಏನಂತೀರಿ???ನಮ್ಮ ಸುತ್ತ ಮುತ್ತ ಇಂತಹ ವಾರಿಜೆ ಯರು ಬಹಳ ಇದ್ದಾರೆ )

ನಿಮ್ಮ ಸಮಾದಾನ ಏನು??

4 comments:

 1. ವಾರಿಜೆ ಇಲ್ಲಿ ವಿಧವೆ, ಜೊತೆಗೆ ಕುಡಿದು ಕುಡಿದು ಸತ್ತ ಗಂಡ; ಗಂಡ ತೀರಿ ಹೋದ ಹನ್ನೊಂದನೆ ದಿನ ಮುಗಿದಿಲ್ಲ, ಶ್ರಾದ್ಧ ಕಾರ್ಯ ನಡೆಯುತ್ತಿರ ಬೇಕಾದರೆ ವಾರಿಜೆಯ ಮನದಲ್ಲಿ ಇಂಥಹ ಬಯಕೆಗಳು ಹುಟ್ಟುವುದೇ ಅಸಹಜತೆ , ಮತ್ತೂ ನಮ್ಮ ಹಿಂದೂ ಧರ್ಮದ ಪ್ರಕಾರ ಅದು ತಪ್ಪು, ಗಂಡ ಕಳೆದುಕೊಂಡ ನಂತರ ಮಗುವಿಗೆ ಆಕೆ ತಾಯಿ-ತಂದೆ ಎರಡೂ ಆಗಿ ಮಗುವಿಗೆ ಸುಂದರ ಭವಿಷ್ಯ ರೂಪಿಸುವುದು ಅವಳ ಆದ್ಯ ಕರ್ತವ್ಯ. ಕೆಟ್ಟ ಆಸೆಗಳು ಮನಸಿನಲ್ಲಿ ಸುಳಿಯುವುದೂ ಕೂಡ ತಪ್ಪು. ಹೆಣ್ಣಿಗೆ ಜೀವನದಲ್ಲಿ ಒಂದೇ ಬಾರಿ ಮದುವೆ. ನಮ್ಮ ಹಿಂದೂ ಧರ್ಮಕ್ಕೆ ವಿದುದ್ಧವಾಗಿ ಶಾಸ್ತ್ರ-ಸಂಪ್ರದಾಯ ಮೀರಿ ನಡೆಯಬಾರದು. ಅವಳು ತನ್ನ ಆಸೆಯನ್ನು ಬದಿಗಿಟ್ಟು ಮಗುವಿನ ಭವಿಷ್ಯದ ಬಗ್ಗೆ ಯೋಚಿಸ ಬೇಕು.

  ReplyDelete
 2. ಇಲ್ಲಿ ಎಲ್ಲ ಧರ್ಮ ,ಸಂಪ್ರದಾಯ ಹಾಗು ಆಚಾರಗಳನ್ನು ಮೀರಿ ನಾವು ಈ ಸಂದರ್ಭವನ್ನು ನೋಡಬಹುದಾದರೆ ಹೇಗೆ??ವಾಂಛೆ ಗಳು ಸಂದರ್ಭಕ್ಕೆ ತಕ್ಕಂತೆ ಬರಲು ಬಹುದು,ಬರದೆಯು ಇರಬಹುದಲ್ಲವೇ ...ನಮ್ಮ ಆಲೋಚನೆಗಳೇ ಹಾಗೆ ಅಲ್ಲವೇ?ಸ್ತಿಮಿತಗಲೇ ಇಲ್ಲದೆ ಬಂದು ಹೋಗುತ್ತದೆ...

  ReplyDelete
 3. ನಂಗ್ಯಾಕೋ ಇದು ಅಸಹಜ ಅನ್ಸುತ್ತೆ.. ವಾರಿಜೆಗೆ ವಾಂಛೆ ಹುಟ್ಟಿದರೆ ಅದು ತಪ್ಪಲ್ಲ..ಆದರೆ ಕೆಲವು ಕಟ್ಟುಪಾಡುಗಳಿವೆ ಅದನ್ನು ಮೀರಿದರೆ ಅನರ್ಥವಾಗುತ್ತದೆ ಅಂತನೇ ಅವನ್ನು ವಿಧಿಸಿರುವುದು..ಅದನ್ನು ಪಾಲಿಸಬೇಕು..

  ReplyDelete
 4. ಅದೇ ನಾನು ಹೇಳ ಹೊರಟಿರುವುದು ಮನಸ್ಸಿಗೆ ಲಂಗು ಲಗಾಮಿಲ್ಲ...
  ಅದು ಬೇಡವಾದ ದಾರಿಗೆ ಸದಾ ಹೋಗಲು ಚಪಲಿಸುತ್ತದೆ.
  ಆದರೆ ಇಲ್ಲಿ ಎಲ್ಲ ಸಂದರ್ಭಗಳನ್ನು ಮೀರಿ...ಕೇವಲ ವಾರಿಜೆಯ ಸ್ಥಾನದಲ್ಲಿ ನಿಂತು ಯೋಚಿಸಬೇಕು

  ReplyDelete